ಬೆಂಗಳೂರು: ಇಂದಿನ ವೇಗದ ಜಗತ್ತಿನಲ್ಲಿ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಕೆಲಸ ಕೆಲಸ ಬದಲಾಗುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಪೈಪೋಟಿಯ ನಡುವೆ, ವೈಯಕ್ತಿಕ ಜೀವನ (Personal Life) ಮತ್ತು ವೃತ್ತಿ ಜೀವನವನ್ನು (Work Life) ಸಮತೋಲನ ಮಾಡುವುದು ಒಂದು ದೊಡ್ಡ ಸಾಹಸವೇ ಸರಿ.
ಆಫೀಸ್ ಕೆಲಸದ ಕಡೆ ಗಮನ ಕೊಟ್ಟರೆ ಮನೆಯಲ್ಲಿ ಅಸಮಾಧಾನ, ಮನೆಯ ಕಡೆ ವಾಲಿದರೆ ಆಫೀಸ್‌ನಲ್ಲಿ ಟಾರ್ಗೆಟ್ ರೀಚ್ ಆಗುವ ಭಯ ಇದರ ನಡುವೆ ಬೆಂಗಳೂರಿನಂತಹ ನಗರಗಳಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಬೇರೆ. ಇವೆಲ್ಲದರ ಪರಿಣಾಮವಾಗಿ ಅನೇಕರು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಹಾಗಾದರೆ, ಈ ಒತ್ತಡದ ನಡುವೆಯೂ ಸಂತೋಷವಾಗಿರುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ನೀವು ಮಾಡಬೇಕಾದ ಪ್ರಮುಖ ಬದಲಾವಣೆಗಳು ಇಲ್ಲಿವೆ:
ಸಮಯದ ಶಿಸ್ತು ರೂಢಿಸಿಕೊಳ್ಳಿ (Time Management)
ಆಫೀಸ್ ಸಮಯ ಆಫೀಸ್‌ಗೆ, ಮನೆಯ ಸಮಯ ಮನೆಗೆ ಮೀಸಲಿರಲಿ. ಕೆಲಸ ಬಾಕಿ ಉಳಿಸಿಕೊಳ್ಳುವುದು ಅಥವಾ ಲೇಟಾಗಿ ಆಫೀಸ್‌ಗೆ ಹೋಗುವುದರಿಂದ ಒತ್ತಡ ಹೆಚ್ಚಾಗುತ್ತದೆ. ಒಂದು ಶಿಸ್ತುಬದ್ಧ ಟೈಮ್ ಟೇಬಲ್ ತಯಾರಿಸಿಕೊಳ್ಳಿ. ನೆನಪಿಡಿ, ಸರಿಯಾದ ಸಮಯ ನಿರ್ವಹಣೆ ಮಾಡಿದರೆ ಮಾತ್ರ ಕುಟುಂಬದ ಜೊತೆ ಕಾಲ ಕಳೆಯಲು ಸಾಧ್ಯ.
ಮನೆಗೆ ಆಫೀಸ್ ಕೆಲಸ ತರಬೇಡಿ
ಡೆಡ್‌ಲೈನ್ ರೀಚ್ ಮಾಡಬೇಕು ಎನ್ನುವ ಕಾರಣಕ್ಕೆ ಆಫೀಸ್ ಕೆಲಸವನ್ನು ಮನೆಗೆ ತರುವ ಅಭ್ಯಾಸ ಬೇಡ. ಇದು ನೀವು ಆಫೀಸ್‌ನಲ್ಲಿ ದಕ್ಷತೆಯಿಂದ (Effectively) ಕೆಲಸ ಮಾಡುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಕೆಲಸವನ್ನು ಆಫೀಸ್‌ನಲ್ಲೇ ಮುಗಿಸಿ ಮನೆಗೆ ಬಂದರೆ, ನಿಮ್ಮ ಮನಸ್ಸು ಹಗುರವಾಗಿರುತ್ತದೆ.
ಇಲ್ಲ ಎಂದು ಹೇಳಲು ಕಲಿಯಿರಿ (Say No)
ಎಲ್ಲಾ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ. ನಿಮ್ಮ ಸಾಮರ್ಥ್ಯಕ್ಕಿಂತ ಮೀರಿದ ಹೆಚ್ಚುವರಿ ಕೆಲಸ ಬಂದಾಗ, ನಯವಾಗಿ ‘ಇಲ್ಲ’ ಎಂದು ಹೇಳುವುದನ್ನು ಕಲಿಯಿರಿ. ಇಲ್ಲವಾದರೆ, ಆಫೀಸ್ ಕೆಲಸಕ್ಕಾಗಿ ನೀವು ನಿಮ್ಮ ವೈಯಕ್ತಿಕ ಸಮಯವನ್ನು ಬಲಿ ಕೊಡಬೇಕಾಗುತ್ತದೆ.
ಡಿಜಿಟಲ್ ಲೋಕದಿಂದ ದೂರವಿರಿ (Digital Detox)
ಮನೆಗೆ ಬಂದ ಮೇಲೂ ಸೋಷಿಯಲ್ ಮೀಡಿಯಾ ಅಥವಾ ಆಫೀಸ್ ಇಮೇಲ್‌ಗಳಲ್ಲಿ ಮುಳುಗಬೇಡಿ. ಇವು ನಿಮ್ಮ ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳುತ್ತವೆ. ಫೋನ್ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ ಅಥವಾ ಸೈಲೆಂಟ್‌ನಲ್ಲಿಡಿ. ಸ್ಕ್ರೀನ್ ನೋಡುವುದನ್ನು ಬಿಟ್ಟು ನಿಮ್ಮ ಪ್ರೀತಿಪಾತ್ರರ ಮುಖ ನೋಡಿ ಮಾತನಾಡಿ
ಆರೋಗ್ಯವೇ ಆಸ್ತಿ
ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿ ನಿಮ್ಮ ಒತ್ತಡವನ್ನು ಶೇ. 50 ರಷ್ಟು ಕಡಿಮೆ ಮಾಡುತ್ತದೆ. ಕೆಲಸದ ನಡುವೆ ಸಣ್ಣ ಬ್ರೇಕ್ ತೆಗೆದುಕೊಳ್ಳಿ, ಸ್ವಲ್ಪ ವಾಕ್ ಮಾಡಿ ಅಥವಾ ಲ್ಯಾಪ್‌ಟಾಪ್‌ನಿಂದ ಕಣ್ಣುಗಳನ್ನು ದೂರವಿರಿಸಿ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಎರಡೂ ಕಡೆ ಬ್ಯಾಲೆನ್ಸ್ ಮಾಡಲು ಸಾಧ್ಯ.
ಗಡಿಗಳನ್ನು ನಿಗದಿಪಡಿಸಿ (Set Boundaries)
ಒಂದು ನಿರ್ದಿಷ್ಟ ಸಮಯದ ನಂತರ ಆಫೀಸ್ ಕರೆಗಳನ್ನು ಸ್ವೀಕರಿಸಬೇಡಿ. ಹಾಗೆಯೇ ಕೆಲಸ ಮಾಡುವಾಗ ಅತಿ ತುರ್ತು ಇಲ್ಲದ ಹೊರತು ಅಡ್ಡಿಪಡಿಸದಂತೆ ಕುಟುಂಬದವರಿಗೂ ತಿಳಿಸಿ. ಈ ರೀತಿಯ ಗಡಿಗಳು ನಿಮ್ಮ ವೃತ್ತಿಪರತೆ ಮತ್ತು ವೈಯಕ್ತಿಕ ಗೌರವ ಎರಡನ್ನೂ ಕಾಪಾಡುತ್ತವೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ 400 ಅಪ್ರೆಂಟಿಸ್ ನೇಮಕಾತಿ; ಪದವೀಧರರಿಗೆ ಇಲ್ಲಿದೆ ಸುವರ್ಣಾವಕಾಶ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


