ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೇವಲ ಸಭೆ-ಸಮಾರಂಭ ಅಥವಾ ಬೃಹತ್ ರ‍್ಯಾಲಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಡಿಜಿಟಲ್ ಲೋಕದಲ್ಲೂ ಅವರು ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತದಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಟಾಪ್-10 ಪೋಸ್ಟ್‌ಗಳ ಪೈಕಿ ಬರೋಬ್ಬರಿ 8 ಪೋಸ್ಟ್‌ಗಳು ಪ್ರಧಾನಿ ಮೋದಿಯವರದ್ದೇ ಆಗಿವೆ, ಈ ಮೂಲಕ ಸೋಷಿಯಲ್ ಮೀಡಿಯಾ ಅಧಿಪತ್ಯದಲ್ಲೂ ತಮಗೆ ತಾವೇ ಸಾಟಿ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ಭಾರತದಲ್ಲಿ ಎಕ್ಸ್‌ನ ಅತಿ ಹೆಚ್ಚು ಇಷ್ಟವಾದ ಟ್ವೀಟ್‌ಗಳಲ್ಲಿ ಪ್ರಧಾನಿ ಮೋದಿ (PM Narendra Modi) ಮುಂದಿದ್ದು, ಟಾಪ್ 10ರಲ್ಲಿ ಬೇರೆ ಯಾವುದೇ ರಾಜಕೀಯ (politician) ನಾಯಕರಿಲ್ಲ.
ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ ಆ ಪೋಸ್ಟ್‌ಗಳು ಯಾವುವು?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ರಷ್ಯನ್ ಭಾಷೆಯ ‘ಭಗವದ್ಗೀತೆ’ ಉಡುಗೊರೆ ನೀಡಿದ ಕ್ಷಣಕ್ಕೆ ಜಗತ್ತೇ ಫಿದಾ ಆಗಿದೆ. ಈ ಪೋಸ್ಟ್ 2.31 ಲಕ್ಷ ಲೈಕ್ಸ್ ಹಾಗೂ ಬರೋಬ್ಬರಿ 6.7 ಮಿಲಿಯನ್ ವೀಕ್ಷಣೆ ಪಡೆದು ಅಗ್ರಸ್ಥಾನದಲ್ಲಿದೆ.
ಪುಟಿನ್ ಅವರನ್ನು ನವದೆಹಲಿಯಲ್ಲಿ ಸ್ವಾಗತಿಸಿದ ಪೋಸ್ಟ್ ಬರೋಬ್ಬರಿ 10.6 ಮಿಲಿಯನ್ ಜನರನ್ನು ತಲುಪುವ ಮೂಲಕ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದೆ. ಇದಕ್ಕೆ 2.14 ಲಕ್ಷ ಲೈಕ್ಸ್ ಹರಿದುಬಂದಿವೆ.
ರಾಮಮಂದಿರದ ಧರ್ಮ ಧ್ವಜಾರೋಹಣದ ಕುರಿತು “ಇದು ಕೋಟ್ಯಂತರ ಜನರು ಕಾದಿದ್ದ ಐತಿಹಾಸಿಕ ಕ್ಷಣ” ಎಂದು ಪ್ರಧಾನಿ ಬರೆದುಕೊಂಡಿದ್ದ ಪೋಸ್ಟ್ 1.40 ಲಕ್ಷ ಲೈಕ್ಸ್ ಗಿಟ್ಟಿಸಿಕೊಂಡಿದೆ.
ಅಂಧ ಮಹಿಳೆಯರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತೀಯ ತಂಡಕ್ಕೆ ಪ್ರಧಾನಿ ನೀಡಿದ ಶುಭ ಹಾರೈಕೆ 1.47 ಲಕ್ಷ ಲೈಕ್ಸ್ ಪಡೆದು ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಜಾಗತಿಕ ವೇದಿಕೆಯಲ್ಲಿ ಮೋದಿಗೆ ಸಂದ ಗೌರವ: 29 ದೇಶಗಳ ಅತ್ಯುನ್ನತ ಪ್ರಶಸ್ತಿ!
ಕೇವಲ ಡಿಜಿಟಲ್ ಲೋಕದಲ್ಲಿ ಮಾತ್ರವಲ್ಲ, ಜಾಗತಿಕ ರಾಜತಾಂತ್ರಿಕತೆಯಲ್ಲೂ ಮೋದಿ ಹೊಸ ಇತಿಹಾಸ ಬರೆದಿದ್ದಾರೆ. ಇತ್ತೀಚೆಗೆ ಓಮನ್ ದೇಶವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಓಮನ್’ (ಪ್ರಥಮ ದರ್ಜೆ) ನೀಡಿ ಮೋದಿಯವರನ್ನು ಗೌರವಿಸಿದೆ. ಇದರೊಂದಿಗೆ ಪ್ರಧಾನಿ ಮೋದಿ ಅವರು ವಿದೇಶಗಳಿಂದ ಒಟ್ಟು 29 ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದಂತಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


