ಕರ್ನಾಟಕ ಸರ್ಕಾರ ಅಕ್ಟೋಬರ್ 1ರಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ಜಾರಿಗೊಳಿಸಿದೆ. ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಯೋಜನೆ ಇದು. ಇದನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಯೋಜನೆ ವಿಚಾರದಲ್ಲಿ ಹಲವು ಗೊಂದಲಗಳಿವೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಎಲ್ಲಾ ಸರ್ಕಾರಿ ನೌಕರರಿಗೆ ಮಾಹಿತಿಯೊಂದನ್ನು ನೀಡಿದೆ. ಈ ಪ್ರಕಟಣೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ದಾಖಲಾಗುವ ಒಳರೋಗಿಗಳಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಕರ್ನಾಟಕ ಸರ್ಕಾರದ ಮಹತ್ವದ ಆರೋಗ್ಯ ಯೋಜನೆಯಾದ ಕರ್ನಾಟಕ ಆರೋಗ್ಯ ಸಂಜೀವಿನಿ [KASS] ಯೋಜನೆಯು ಅಕ್ಟೋಬರ್ 1, 2025 ರಿಂದ ಅಧಿಕೃತ ಆದೇಶದನ್ವಯ ಜಾರಿಯಾಗಿರುತ್ತದೆ.
ಈ ಯೋಜನೆಯಡಿಯಲ್ಲಿ ಎಲ್ಲಾ ಸರ್ಕಾರಿ ನೌಕರರು KASS ಯೋಜನೆಯ ವ್ಯಾಪ್ತಿಯಲ್ಲಿ ರಾಜ್ಯದಾದ್ಯಂತ ನೋಂದಾಯಿತವಾಗಿರುವ ಆಸ್ಪತ್ರೆಗಳಲ್ಲಿಯೂ ನೌಕರರು ಒಳರೋಗಿಗಳಾಗಿ ದಾಖಲಾಗಿ ಸೂಕ್ತ ಚಿಕಿತ್ಸೆ ಮತ್ತು ಅವಶ್ಯಕ ಶಸ್ತ್ರಚಿಕಿತ್ಸೆಗಳನ್ನು ನಗದುರಹಿತವಾಗಿ ಪಡೆದುಕೊಳ್ಳುವುದಾಗಿರುತ್ತದೆ.
ಯೋಜನೆ ಜಾರಿಯಾದಾಗಿನಿಂದಲೂ ಹಲವಾರು ಸರ್ಕಾರಿ ನೌಕರರು ಸ್ವತ: ಮತ್ತು ಅವರ ತಂದೆ-ತಾಯಿಯರನ್ನು ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ಪಡೆದುಕೊಂಡು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಆದರೆ, ಕೆಲವು ನೌಕರರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದು, ಪ್ರಸ್ತುತ ಸಹ ನೋಂದಣಿ, ಆರ್ಥಿಕ ವಿಭಾಗಗಳಲ್ಲಿ ತೊಂದರೆಗಳನ್ನು ಅನುಭವಿಸಿರುವ ಬಗ್ಗೆ ವಾಟ್ಸಾಪ್ ಗುಂಪುಗಳಲ್ಲಿ ಅವರ ಸಮಸ್ಯೆಗಳನ್ನು ಹೇಳಿಕೊಂಡಿರುವುದನ್ನು ಗಮನಿಸಲಾಗಿದೆ.
ಎಲ್ಲಾ ವಾಟ್ಸಾಪ್ ಗುಂಪುಗಳಲ್ಲಿ ನೀಡಲಾಗಿರುವ, ನಿಮ್ಮ ವ್ಯಾಪ್ತಿಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಸುವರ್ಣ ಆರೋಗ್ಯ ಟ್ರಸ್ಟಿನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವುದು ಎಂದು ಹೇಳಿದೆ.
ಇನ್ನು ಮುಂದೆ ಇಂತಹ ಪ್ರಕರಣಗಳು ಘಟಿಸಿದ್ದಲ್ಲಿ, ತಾವು ಅನುಭವಿಸಿರುವ ಸಮಸ್ಯೆಗಳು ಹಾಗೂ ಪರಿಹಾರಗಳಿಗೆ ಸಂಬಂಧಿಸಿದಂತೆ ಲಗತ್ತಿಸಿರುವ ನಮೂನೆಯಲ್ಲಿ ಭರ್ತಿ ಮಾಡಿ, ಸೂಕ್ತ ದಾಖಲೆಗಳನ್ನು ಲಗತ್ತಿಸಿ ರಾಜ್ಯ ಸಂಘಕ್ಕೆ ತಲುಪಿಸಿ, ಸದರಿ ವಿಚಾರಗಳನ್ನು ಸರ್ಕಾರದ ಹಂತದಲ್ಲಿನ ಅಧಿಕಾರಿಗಳ ಗಮನಕ್ಕೆ ತಂದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಲಾಗುವುದು ಎಂದು ಸರ್ಕಾರಿ ನೌಕರರ ಸಂಘ ಹೇಳಿದೆ.
ಆರೋಗ್ಯ ಸಂಜೀವಿನಿ ಯೋಜನೆ ಕುರಿತು ಗೊಂದಲಗಳಿದ್ದರೆ, ಸಹಾಯ ಬೇಕಿದ್ದರೆ ಸಂಪರ್ಕಿಸಬೇಕಾದ ಇ-ಮೇಲ್ ಐಡಿ ksgea.bng@gmail.com ಮತ್ತು ವಾಟ್ಸಪ್ ಸಂಖ್ಯೆ 9886116622.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ದೂರು/ ಸಲಹೆ ನಮೂನೆ
- ನೌಕರನ ಹೆಸರು
- ಹುದ್ದೆ/ ಪದನಾಮ
- ಕಾರ್ಯ ನಿರ್ವಹಣೆ ಮಾಡುತ್ತಿರುವ ಕಚೇರಿ
- ಮೊಬೈಲ್ ಸಂಖ್ಯೆ
- ಕೆ.ಜಿ.ಐ.ಡಿ.ಸಂಖ್ಯೆ
- ರೋಗಿಯ ಹೆಸರು
- ಒಳ ರೋಗಿ ಸಂಖ್ಯೆ
- ಆಸ್ಪತ್ರೆಯ ಹೆಸರು, ವಿಳಾಸ ಮತ್ತು ಮುಖ್ಯಸ್ಥರ ದೂರವಾಣಿ ಸಂಖ್ಯೆ
- ಕಾಯಿಲೆಯ ವಿವರಗಳು
- ಶಸ್ತ್ರ ಚಿಕಿತ್ಸಾ ವಿವರ-ಇದ್ದಲ್ಲಿ
- ಎದುರಿಸಿದ ಸಮಸ್ಯೆಗಳು
- ಸಲಹೆಗಳು
ಈ ನಮೂನೆಯಲ್ಲಿ ಸರ್ಕಾರಿ ನೌಕರರು ಸಮಸ್ಯೆಗಳನ್ನು ಭರ್ತಿ ಮಾಡಿ, ನೌಕರನ ಸಹಿ ಹಾಕಿ ಕಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


