Thursday, December 25, 2025
spot_img
More
    spot_img
    HomeLatest newsಪ್ರೀತಿ ಮತ್ತು ಸಾಮರಸ್ಯದ ಸಂಕೇತ 'ಕ್ರಿಸ್‌ಮಸ್': ಈ ಪವಿತ್ರ ದಿನದ ಮತ್ತು ಇತಿಹಾಸ ಮತ್ತು ಆಚರಣಾ...

    ಪ್ರೀತಿ ಮತ್ತು ಸಾಮರಸ್ಯದ ಸಂಕೇತ ‘ಕ್ರಿಸ್‌ಮಸ್’: ಈ ಪವಿತ್ರ ದಿನದ ಮತ್ತು ಇತಿಹಾಸ ಮತ್ತು ಆಚರಣಾ ವಿಧಾನ ತಿಳಿಯಿರಿ

    ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಮೈ ಹೆಪ್ಪುಗಟ್ಟಿಸುವ ಚಳಿಯ ನಡುವೆಯೂ ಮನಸ್ಸಿಗೆ ಬೆಚ್ಚಗಿನ ಅನುಭವ ನೀಡುವ ಹಬ್ಬವೇ ಕ್ರಿಸ್‌ಮಸ್. ಪ್ರತಿ ವರ್ಷ ಡಿಸೆಂಬರ್ 25 ರಂದು ಜಗತ್ತಿನಾದ್ಯಂತ ‘ಯೇಸು ಕ್ರಿಸ್ತ’ನ ಜನ್ಮದಿನವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಭಾರತದಿಂದ ಅಮೆರಿಕದವರೆಗೆ, ರಷ್ಯಾದಿಂದ ಆಸ್ಟ್ರೇಲಿಯಾದವರೆಗೆ ಗಡಿಗಳ ಹಂಗಿಲ್ಲದೆ ಎಲ್ಲೆಡೆ ಸಂಭ್ರಮ ಮನೆಮಾಡಿರುತ್ತದೆ.

    ಕ್ರಿಸ್‌ಮಸ್ ಈವ್’ ಹಾಗೂ ಹಬ್ಬದ ಸಿದ್ಧತೆ
    ಹಬ್ಬಕ್ಕೆ ಒಂದು ದಿನ ಮೊದಲೇ ಅಂದರೆ ಡಿಸೆಂಬರ್ 24ರಂದು ‘ಕ್ರಿಸ್‌ಮಸ್ ಈವ್’ ಆಚರಿಸುವ ಮೂಲಕ ಸಂಭ್ರಮಕ್ಕೆ ನಾಂದಿ ಹಾಡಲಾಗುತ್ತದೆ. ಕ್ರೈಸ್ತ ಬಾಂಧವರು ಚರ್ಚ್‌ಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀಗಳನ್ನು ಮಿನುಗುವ ದೀಪಗಳು, ನಕ್ಷತ್ರಗಳು ಮತ್ತು ಗಂಟೆಗಳಿಂದ ಅಲಂಕರಿಸಲಾಗುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಕೇಕ್ ಕತ್ತರಿಸಿ, ವಿಶೇಷ ಭೋಜನ ಸವಿಯುವುದು ಈ ಹಬ್ಬದ ಆಕರ್ಷಣೆ.

    ಕ್ರಿಸ್‌ಮಸ್ ಇತಿಹಾಸ

    ಕ್ರಿಸ್‌ಮಸ್ ಆಚರಣೆಗೆ ಶತಮಾನಗಳ ಇತಿಹಾಸವಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಆಚರಣೆ ಮೊದಲು ಶುರುವಾಗಿದ್ದು ರೋಮ್‌ನಲ್ಲಿ.ಆರಂಭದಲ್ಲಿ ರೋಮ್‌ನಲ್ಲಿ ಡಿಸೆಂಬರ್ 25 ಅನ್ನು ಸೂರ್ಯದೇವನ ಜನ್ಮದಿನವಾಗಿ ಆಚರಿಸಲಾಗುತ್ತಿತ್ತು.ಕ್ರಿ.ಶ. 336ರ ವೇಳೆಗೆ ಕ್ರೈಸ್ತ ಧರ್ಮ ಪ್ರಚಾರ ವೇಗ ಪಡೆದಾಗ, ಭಕ್ತರು ಯೇಸುಕ್ರಿಸ್ತನನ್ನು ‘ಸೂರ್ಯದೇವನ ಅವತಾರ’ ಎಂದೇ ಪರಿಗಣಿಸಿ ಆತನ ಜನ್ಮದಿನವನ್ನು ಅಂದೇ ಆಚರಿಸಲು ಶುರು ಮಾಡಿದರು.ಕ್ರಿಸ್‌ಮಸ್ ಎಂಬ ಪದವು ‘ಮಾಸ್ ಆಫ್ ಕ್ರೈಸ್ಟ್’ (Mass of Christ) ಎಂಬ ಪದದಿಂದ ಬಂದಿದ್ದು, ಯೇಸು ಕ್ರಿಸ್ತನು ಬೆಥ್ಲೆಹೆಮ್‌ನಲ್ಲಿ ಜನಿಸಿದ ಪವಿತ್ರ ದಿನವನ್ನು ಇದು ಸೂಚಿಸುತ್ತದೆ.

    ಯೇಸುವಿನ ಬಾಲ್ಯದ ನೆನಪಿಗಾಗಿ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆ ಅಥವಾ ಗೋಶಾಲೆಯನ್ನು ನಿರ್ಮಿಸಿ, ಕ್ರಿಸ್ತಜನನದ ಗೊಂಬೆಗಳನ್ನಿಡಲಾಗುತ್ತದೆ,ಯೇಸುವಿನ ಬಾಲ್ಯದ ನೆನಪಿಗಾಗಿ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆ ಅಥವಾ ಗೋಶಾಲೆಯನ್ನು ನಿರ್ಮಿಸಿ, ಕ್ರಿಸ್ತಜನನದ ಗೊಂಬೆಗಳನ್ನಿಡಲಾಗುತ್ತದೆ,ಯೇಸುವನ್ನು ಬರಮಾಡಿಕೊಳ್ಳಲು ಮನೆಮನೆಗೆ ತೆರಳಿ ಕ್ಯಾರೋಲ್ ಹಾಡುಗಳನ್ನು ಹಾಡುವುದು ಈ ಹಬ್ಬದ ಅತ್ಯಂತ ಸುಂದರ ಪರಂಪರೆ.

    ಕ್ರಿಸ್‌ಮಸ್ ಎಂದ ತಕ್ಷಣ ನೆನಪಾಗುವುದೇ ಕೆಂಪು ಬಟ್ಟೆ ತೊಟ್ಟ ಸಾಂಟಾ ಕ್ಲಾಸ್ ಈತ ಕೇವಲ ಕಾಲ್ಪನಿಕ ವ್ಯಕ್ತಿಯಲ್ಲ. 4ನೇ ಶತಮಾನದಲ್ಲಿ ಬದುಕಿದ್ದ ‘ಸಂತಾ ನಿಕೋಲಾಸ್’ ಎಂಬ ಪಾದ್ರಿ ಮಕ್ಕಳ ಮೇಲಿನ ಪ್ರೀತಿಗಾಗಿ ಉಡುಗೊರೆಗಳನ್ನು ನೀಡುತ್ತಿದ್ದರು. ಆ ಪರಂಪರೆಯೇ ಇಂದು ಸಾಂಟಾ ಕ್ಲಾಸ್ ರೂಪದಲ್ಲಿ ಮುಂದುವರಿಯುತ್ತಿದೆ.ಈ ಹಬ್ಬವನ್ನು ಜಗತ್ತಿನಾದ್ಯಂತ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ

    ಆಚರಣೆಯ ವಿಧಾನ: ಹೀಗಿರಲಿ ನಿಮ್ಮ ಹಬ್ಬದ ದಿನಚರಿ!
    ಕ್ರಿಸ್‌ಮಸ್ ಈವ್ (ಜಾಗರಣೆ): ಹಬ್ಬಕ್ಕೆ ಒಂದು ದಿನ ಮೊದಲೇ (ಡಿ. 24) ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಮೇಣದಬತ್ತಿ ಬೆಳಗುವ ಮೂಲಕ ಸಂಭ್ರಮಕ್ಕೆ ಚಾಲನೆ ಸಿಗುತ್ತದೆ.

    ನಕ್ಷತ್ರ ಮತ್ತು ಅಲಂಕಾರ: ಜ್ಞಾನಿಗಳಿಗೆ ದಾರಿ ತೋರಿಸಿದ ‘ಬೆಳ್ಳಿಯ ನಕ್ಷತ್ರ’ದ ನೆನಪಿಗಾಗಿ ಮನೆಗಳ ಮುಂದೆ ನಕ್ಷತ್ರಗಳನ್ನು ಕಟ್ಟಿ, ‘ಕ್ರಿಸ್‌ಮಸ್ ಟ್ರೀ’ಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.

    ಮನೆ ಮನೆಗೆ ಕ್ಯಾರೋಲಿಂಗ್: ಯೇಸುವಿನ ಆಗಮನದ ಸುದ್ದಿಯನ್ನು ಹಾಡಿನ ಮೂಲಕ ಸಾರಲು ಜನರು ತಂಡೋಪತಂಡವಾಗಿ ಮನೆಮನೆಗೆ ತೆರಳಿ ಕ್ಯಾರೋಲ್ ಹಾಡುತ್ತಾರೆ.

    ಹಂಚಿಣ್ಣುವ ಸುಖ: ಸಾಂಟಾ ಕ್ಲಾಸ್‌ನಂತೆ ಅನಾಥರಿಗೆ ಮತ್ತು ಬಡವರಿಗೆ ಉಡುಗೊರೆ ನೀಡುವುದು ಹಾಗೂ ಪ್ಲಮ್ ಕೇಕ್ ಹಂಚುವುದು ಈ ಹಬ್ಬದ ಜೀವಂತಿಕೆ.

    ಜರ್ಮನಿ: ಯುಲೆಟೈಡ್ (Yuletide)

    ಸ್ಪೇನ್: ನವಿಡಾಡ್ (Navidad)

    ಇಟಲಿ: ನಟಾಲ್ (Natal)

    ಫ್ರಾನ್ಸ್: ನೋಯೆಲ್ (Noel)

    ಕ್ರಿಸ್‌ಮಸ್ ಕೇವಲ ಒಂದು ಧರ್ಮದ ಹಬ್ಬವಾಗಿ ಉಳಿದಿಲ್ಲ; ಇದು ಪ್ರೀತಿ, ಶಾಂತಿ ಮತ್ತು ಸೌಹಾರ್ದತೆಯ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ.

    ಕ್ರಿಸ್‌ಮಸ್​ ಹಬ್ಬದ ಮಹತ್ವ

    ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ಕ್ರಿಸ್‌ಮಸ್ ಕೇವಲ ಒಂದು ದಿನಾಂಕವಲ್ಲ, ಅದೊಂದು ಭಾವನೆ. ಇದರ ಮಹತ್ವವನ್ನು ಈ ಕೆಳಗಿನ ಪ್ರಮುಖ ಅಂಶಗಳಲ್ಲಿ ಕಾಣಬಹುದು:

    ಕ್ರೈಸ್ತ ಧರ್ಮೀಯರ ನಂಬಿಕೆಯಂತೆ, ಜನರನ್ನು ಪಾಪಗಳಿಂದ ಮುಕ್ತಗೊಳಿಸಲು ಮತ್ತು ಪ್ರೀತಿಯ ಮಾರ್ಗವನ್ನು ತೋರಿಸಲು ದೇವರು ತನ್ನ ಪುತ್ರನಾದ ‘ಯೇಸು ಕ್ರಿಸ್ತ’ನನ್ನು ಭೂಮಿಗೆ ಕಳುಹಿಸಿದ ಪವಿತ್ರ ದಿನವಿದು,

    “ನಿನ್ನಂತೆಯೇ ನಿನ್ನ ನೆರೆಯವನನ್ನೂ ಪ್ರೀತಿಸು” ಎಂಬ ಯೇಸುವಿನ ಬೋಧನೆಯಂತೆ, ಈ ಹಬ್ಬವು ಜಾತಿ-ಮತ ಬೇಧವಿಲ್ಲದೆ ಪರಸ್ಪರ ಪ್ರೀತಿ ಮತ್ತು ಸಾಮರಸ್ಯದಿಂದ ಬಾಳುವುದನ್ನು ಕಲಿಸುತ್ತದೆ.

    ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಕೇವಲ ಸಂಪ್ರದಾಯವಲ್ಲ; ಇದು ನಮ್ಮಲ್ಲಿರುವ ಸಂಪತ್ತನ್ನು ಇತರರೊಂದಿಗೆ, ವಿಶೇಷವಾಗಿ ಬಡವರು ಮತ್ತು ಅನಾಥರೊಂದಿಗೆ ಹಂಚಿಕೊಳ್ಳುವ ‘ತ್ಯಾಗ’ದ ಗುಣವನ್ನು ಎತ್ತಿ ತೋರಿಸುತ್ತದೆ.

    ಮೈ ಹೆಪ್ಪುಗಟ್ಟಿಸುವ ಚಳಿಗಾಲದ (Winter Solstice) ಸಮಯದಲ್ಲಿ ಬರುವ ಈ ಹಬ್ಬವು, ಮನುಷ್ಯನ ಜೀವನದ ಕಷ್ಟಗಳೆಂಬ ಕತ್ತಲೆಯನ್ನು ಹೋಗಲಾಡಿಸಿ ಹೊಸ ಭರವಸೆಯ ಬೆಳಕನ್ನು ತರುತ್ತದೆ ಎಂಬ ನಂಬಿಕೆ ಇದೆ.

    ಇಂದಿನ ಓಟದ ಬದುಕಿನಲ್ಲಿ ದೂರವಾಗಿರುವ ಸ್ನೇಹಿತರು ಮತ್ತು ಸಂಬಂಧಿಕರು ಒಂದೆಡೆ ಸೇರಿ, ಕೇಕ್ ಸವಿಯುತ್ತಾ ಪ್ರೀತಿಯನ್ನು ಹಂಚಿಕೊಳ್ಳುವ ಸುಂದರ ಅವಕಾಶವನ್ನು ಈ ಹಬ್ಬ ಒದಗಿಸುತ್ತದೆ.

    ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ;ಇಂದಿನ ದರ ಪಟ್ಟಿ ನೋಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಖ್ಯಾತ ಸಂಗೀತ ಸಂಯೋಜಕ ಶ್ರೀ ಮೃತ್ಯುಂಜಯ ದೊಡ್ಡವಾಡ ಜನ್ಮದಿನದ ಪ್ರಯುಕ್ತ ‘ಭಾವ ಝೇಂಕಾರ’

    ನಿನ್ನೆ ( ಡಿಸೆಂಬರ್ 24 ) ಬುಧವಾರ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಖ್ಯಾತ ಸಂಗೀತ ಸಂಯೋಜಕ ಶ್ರೀ ಮೃತ್ಯುಂಜಯ ದೊಡ್ಡವಾಡ ಅವರ ಜನ್ಮದಿನದ ಅಂಗವಾಗಿ ಮೃತ್ಯುಂಜಯ ದೊಡ್ಡವಾಡ ಸ್ನೇಹ ಬಳಗ...

    ಮದ್ಯಪಾನದಲ್ಲಿ ‘ಸೇಫ್ ಲಿಮಿಟ್’ ಇಲ್ಲ! ಸ್ವಲ್ಪ ಕುಡಿದ್ರೂ ಕ್ಯಾನ್ಸರ್ ಗ್ಯಾರಂಟಿ; ಟಾಟಾ ಸೆಂಟರ್ ಶಾಕಿಂಗ್ ರಿಪೋರ್ಟ್

    ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯ ಸಡಗರದಲ್ಲಿರುವವರಿಗೆ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ (ACTREC) ಆತಂಕಕಾರಿ ಸುದ್ದಿಯೊಂದನ್ನು ನೀಡಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಮದ್ಯಪಾನದಲ್ಲಿ 'ಸುರಕ್ಷಿತ ಮಿತಿ' (Safe Limit) ಎಂಬುದು ಕೇವಲ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading