ನವದೆಹಲಿ: ಭಾರತೀಯರಿಗೆ ಚಿನ್ನವೆಂದರೆ ಕೇವಲ ಆಭರಣವಲ್ಲ, ಅದೊಂದು ಭಾವನೆ ಮತ್ತು ನಂಬಿಕಸ್ತ ಹೂಡಿಕೆ. ಆದರೆ, ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಬಂಗಾರ ಮತ್ತು ಬೆಳ್ಳಿಯ ಬೆಲೆಗಳು ಜನಸಾಮಾನ್ಯರ ನಿದ್ದೆಗೆಡಿಸಿತ್ತು. ಬಂಗಾರ ಅಷ್ಟೇ ಅಲ್ಲದೆ, ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹5,000 ರೂಪಾಯಿಗಳ ಭರ್ಜರಿ ಜಿಗಿತ ಕಂಡುಬಂದಿದ್ದು, ಬಿಳಿ ಲೋಹವು ಜನಸಾಮಾನ್ಯರ ಕೈಗೆಟುಕದಂತಾಗಿದೆ.ಆದರೆ, ಇಂದು ಆಭರಣ ಪ್ರಿಯರಿಗೆ ಸ್ವಲ್ಪ ನಿಟ್ಟುಸಿರು ಬಿಡುವ ಸುದ್ದಿ ಸಿಕ್ಕಿದೆ.
ಸತತ ಏರಿಕೆಯ ನಂತರ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಅಂದರೆ, ದರ ಏರಿಕೆಯ ಓಟಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.ಮಾರುಕಟ್ಟೆಯ ಇಂದಿನ ಲೇಟೆಸ್ಟ್ ದರಗಳನ್ನು ಗಮನಿಸುವುದಾದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಇಂದು 1 ಗ್ರಾಂ ಚಿನ್ನದ ಬೆಲೆ ₹13,418 ಆಗಿದ್ದು, ನಿನ್ನೆಯ ಬೆಲೆಯೇ ಮುಂದುವರಿದಿದೆ. ಅದರಂತೆ, 8 ಗ್ರಾಂ (1 ಪವನ್) ಚಿನ್ನಕ್ಕೆ ₹1,07,344, 10 ಗ್ರಾಂ ಬಂಗಾರಕ್ಕೆ ₹1,34,180 ಹಾಗೂ 100 ಗ್ರಾಂ ಚಿನ್ನಕ್ಕೆ ಭರ್ಜರಿ ₹13,41,800 ದರ ನಿಗದಿಯಾಗಿದೆ. ಬೆಲೆ ಏರಿಕೆಯ ಭೀತಿಯಲ್ಲಿದ್ದ ಹೂಡಿಕೆದಾರರಿಗೆ ದರದಲ್ಲಿನ ಈ ಸ್ಥಿರತೆ ಸದ್ಯಕ್ಕೆ ಸಣ್ಣ ಸಮಾಧಾನ ತಂದಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,34,180
ನಾಗ್ಪುರ ₹1,34,180
ಮುಂಬೈ ₹1,34,180
ಚೆನ್ನೈ ₹1,35,280
ಕೋಲ್ಕತ್ತಾ ₹1,34,180
ಪಾಟ್ನಾ ₹1,34,230
ಸೂರತ್ ₹1,34,230
ಚಂಡೀಗಢ ₹1,34,330
ಲಕ್ನೋ ₹1,34,330
ವಿಸಾ, ಮಾಸ್ಟರ್ ಕಾರ್ಡ್‌ಗೆ ಗೂಗಲ್ ಪೇ ಟಕ್ಕರ್! ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಭಾರತದಲ್ಲಿ ಮೊದಲ ಜಾಗತಿಕ ಕಾರ್ಡ್ ಲಾಂಚ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


