ತುಮಕೂರು ನಗರಕ್ಕೆ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ. ಇನ್ನೂ ಪ್ರಸ್ತಾವನೆ ಹಂತದಲ್ಲಿರುವ ಯೋಜನೆಯು 59.6 ಕಿ.ಮೀ. ಇರಲಿದೆ. ಈ ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರು ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿತ್ತು.
ಬೆಂಗಳೂರು ನಗರದ ಮಾದಾವರದಿಂದ ತುಮಕೂರು ನಗರಕ್ಕೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡುವ ಯೋಜನೆ ಡಿಪಿಆರ್ ತಯಾರು ಮಾಡಲು 3 ಕಂಪನಿಗಳು ಆಸಕ್ತಿ ತೋರಿವೆ. ಜನವರಿ ಮೊದಲ ವಾರದಲ್ಲಿ ಯಾವ ಕಂಪನಿಗೆ ಟೆಂಡರ್ ನೀಡಲಾಗುತ್ತದೆ? ಎಂಬುದು ತಿಳಿಯಲಿದೆ.
ಸುಮಾರು20,896 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಒಟ್ಟು 27 ನಮ್ಮ ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಬೇಕಿದೆ. ಈಗಾಗಲೇ ಹಸಿರು ಮಾರ್ಗದಲ್ಲಿ ಮಾದಾವರ ತನಕ ಮೆಟ್ರೋ ಸಂಚಾರವನ್ನು ನಡೆಸುತ್ತಿದ್ದು, ಇದನ್ನು ತುಮಕೂರು ತನಕ ವಿಸ್ತರಣೆ ಮಾಡುವುದು ಯೋಜನೆಯಾಗಿದೆ.
ಯೋಜನೆ ವಿವರ: ಆರ್‌ಐಟಿಇಎಸ್ ಲಿಮಿಟೆಡ್, ಕ್ಯಾಪಿಟಲ್ ಫಾರ್‌ಚೂನ್ಸ್ ಪ್ರೈವೇಟ್ ಲಿಮಿಟೆಡ್, ಆರ್‌ವೇ ಇಂಜಿನಿಯರಿಂಗ್ ಕನ್ಸ್‌ಲ್ಟಟೆಂಟ್ ಲಿಮಿಟೆಡ್ ತುಮಕೂರು ನಮ್ಮ ಮೆಟ್ರೋ ಯೋಜನೆಯ ಡಿಪಿಆರ್ ತಯಾರು ಮಾಡಲು ಟೆಂಡರ್ ಸಲ್ಲಿಕೆ ಮಾಡಿವೆ.
ಬಿಡ್‌ಗಳ ತಾಂತ್ರಿಕ ಅಂಶಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಜನವರಿಯಲ್ಲಿ ಟೆಂಡರ್ ಅಂತಿಮಗೊಳಿಸುವ ನಿರೀಕ್ಷೆ ಇದೆ. ಬೆಂಗಳೂರು ನಗರದಲ್ಲಿಯೇ ಮೆಟ್ರೋ ಯೋಜನೆ ಕುಂಟುತ್ತಾ ಸಾಗಿದೆ, ಸರ್ಕಾರ ತುಮಕೂರು ನಗರಕ್ಕೆ ಮೆಟ್ರೋ ಸೇವೆ ವಿಸ್ತರಣೆ ಮಾಡಲು ಆಸಕ್ತಿ ತೋರಿದೆ ಎಂದು ವಿರೋಧ ಪಕ್ಷಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ.
ತುಮಕೂರು ಜಿಲ್ಲಾ ಉಸ್ತುವಾರಿ ಮತ್ತು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತುಮಕೂರು ನಗರಕ್ಕೆ ನಮ್ಮ ಮೆಟ್ರೋ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಮೂರು ಕಂಪನಿಗಳ ಪೈಕಿ ಯಾವುದಕ್ಕೆ ಡಿಪಿಆರ್ ತಯಾರು ಮಾಡಲು ಅನುಮತಿ ಸಿಗಲಿದೆ ಎಂದು ಕಾದು ನೋಡಬೇಕಿದೆ. ಟೆಂಡರ್ ನಿಯಮಾವಳಿ ಪ್ರಕಾರ ಡಿಪಿಆರ್ ತಯಾರು ಮಾಡು 5 ತಿಂಗಳ ಗಡುವನ್ನು ಬಿಎಂಆರ್‌ಸಿಎಲ್ ಹಾಕಿದೆ. ಆದರೆ ಈ ಗಡುವು ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.
ಡಿಪಿಆರ್‌ನಲ್ಲಿ ಆರ್‌ವೇ ಇಂಜಿನಿಯರಿಂಗ್ ಕನ್ಸ್‌ಲ್ಟಟೆಂಟ್ ಲಿಮಿಟೆಡ್ 1.26 ಕೋಟಿ ರೂ. ಮೊತ್ತಕ್ಕೆ ಬಿಡ್ ಮಾಡಿದ್ದು, ಡಿಪಿಆರ್ ತಯಾರು ಮಾಡುವ ಹೊಣೆ ಇದರ ಪಾಲಾಗಲಿದೆ ಎಂದು ಅಂದಾಜಿಸಲಾಗಿದೆ.
ಮಾದಾವರ, ನೆಲಮಂಗಲ, ದಾಬಸ್ ಪೇಟೆ, ಕ್ಯಾತ್ಸಂದ್ರ ಮಾರ್ಗವಾಗಿ ತುಮಕೂರು ನಗರಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವುದು ಪ್ರಸ್ತಾವಿತ ಯೋಜನೆಯಾಗಿದೆ. ಈ ಯೋಜನೆ ಜಾರಿಯಾದರೆ ಇದು ಕರ್ನಾಟಕದ ಮೊದಲ ಅಂತರ್ ನಗರ ಮೆಟ್ರೋ ಜಾಲ ಎಂಬ ಹೆಗ್ಗಳಿಕೆ ಪಡೆಯಲಿದೆ.
ಮಾದಾವರ, ನೆಲಮಂಗಲ, ದಾಬಸ್ ಪೇಟೆ, ಕ್ಯಾತ್ಸಂದ್ರ ಮಾರ್ಗವಾಗಿ ತುಮಕೂರು ನಗರಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವುದು ಪ್ರಸ್ತಾವಿತ ಯೋಜನೆಯಾಗಿದೆ. ಈ ಯೋಜನೆ ಜಾರಿಯಾದರೆ ಇದು ಕರ್ನಾಟಕದ ಮೊದಲ ಅಂತರ್ ನಗರ ಮೆಟ್ರೋ ಜಾಲ ಎಂಬ ಹೆಗ್ಗಳಿಕೆ ಪಡೆಯಲಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸದ್ಯ ಮಾದಾವರ-ರೇಷ್ಮೆ ಸಂಸ್ಥೆ ತನಕ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತಿದೆ. ಡಿಪಿಆರ್ ತಯಾರಿ ಬಳಿಕ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತದೆ. ಕೇಂದ್ರದ ಒಪ್ಪಿಗೆ ಸಿಕ್ಕಿದ ಬಳಿಕ ಈ ಯೋಜನೆಯ ಕುರಿತು ಕರ್ನಾಟಕ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ತುಮಕೂರು-ಬೆಂಗಳೂರು ನಗರದ ನಡುವೆ ಪ್ರತಿದಿನ ಸಾವಿರಾರು ಜನರು ಸಂಚಾರವನ್ನು ನಡೆಸುತ್ತಾರೆ. ರೈಲು, ಬಸ್, ಖಾಸಗಿ ವಾಹನದಲ್ಲಿ ಜನರು ಓಡಾಡುತ್ತಾರೆ. ಉಭಯ ನಗರದ ನಡುವೆ ಮೆಟ್ರೋ ಸಂಚಾರ ಆರಂಭವಾದರೆ ಜನರ ಸಮಯ ಉಳಿತಾಯವಾಗಲಿದೆ. ಸಂಚಾರ ದಟ್ಟಣೆಯಲ್ಲಿ ಸಿಲುಕದೇ ನೇರವಾಗಿ ಬೆಂಗಳೂರು ನಗರಕ್ಕೆ ಆಗಮಿಸಬಹುದಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


